ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಿಂದ 35 ಕಿಮೀ ದೂರದಲ್ಲಿರುವ ಉಂಚಳ್ಳಿ ಜಲಪಾತ (ಲಶಿಂಗ್ಟನ್ಗೆ ಫಾಲ್ಸ್) 116 ಮೀಟರ್ ಅಂದರೆ (381 ಅಡಿ) ಧುಮುಕುತ್ತದೆ. ಅಘನಾಶಿನಿ ನದಿಯ ಡ್ರಾಪ್ನಿಂದ ಸೃಷ್ಟಿಯಾಗಿದ್ದು ಕಲ್ಲು, ಕಣಿವೆಯಲ್ಲಿ ಭೋರ್ಗರೆಯುತ್ತದೆ.

attraction_20151201105635_136112

ಪ್ರವಾಸಿಗರ ಅದ್ಬುತ ತಾಣವಾಗಿದ್ದು ಪ್ರಕೃತಿಯ ಮಡಿಲಿನಲ್ಲಿರುವ ಈ ಸುಂದರ ಜಲಧಾರೆಯನ್ನು ನೋಡಲು ಪ್ರತಿಧಿನವು ಸಾವಿರಾರು ಪ್ರವಾಸಿಗರು ಬರುತ್ತಾರೆ. ಜಲಪಾತದ ಸಮೀಪ ಯಾವುದೇ ಅಂಗಡಿ ಆಥವಾ ಇತರೆ ಮೂಲಭೂತ ಸೌಕರ್ಯಗಳು ಇರುವುದಿಲ್ಲ. ಹಾಗೆನೆ ಸಿದ್ದಾಪುರ ಹಾಗೂ ಶಿರಸಿಯಿಂದ ಬಸ್ ವ್ಯವಸ್ಥೆ ಇದೆ. ಹೆಗ್ಗರಣಿಯಿಂದ ಬಸ್ ಸೌಲಭ್ಯವಿದೆ

ಎಲ್ಲಾ ಸಮಯದಲ್ಲೂ ಇರದ ಕಾರಣ ಖಾಸಗಿ ವಾಹನದಲ್ಲಿ ಜಲಪಾತದವರೆಗೂ ತಲುಪಬಹುದು.

Advertisements